ಡಿಕೆ ಶಿವಕುಮಾರ್ ಸಿಎಂ ಆಗುವುದು ಖಚಿತ
"ಡಿಕೆಶಿಯವರೆ ನೀವು ಕಾಂಗ್ರೆಸ್ ಪಕ್ಷದಲ್ಲಿದ್ದರೆ ಮುಖ್ಯಮಂತ್ರಿ ಆಗುವುದು ಅಸಾದ್ಯ " ಈ ಹಿಂದೆ ಬಿಎಸ್ ಯೆಡ್ಯೂರಪ್ಪ ಸದನದಲ್ಲಿ ಆಡಿದ ಮಾತು ನಿಜವಾಗುವ ಲಕ್ಷಣಗಳು ಗೋಚರ.
ಪ್ರಭು ಆದಿ
ನುಡಿದಂತೆ ನಡೆಯದೆ ಹೋದರೆ ಸಿಎಂ ಸಿದ್ದರಾಮಯ್ಯ ಎನ್ನವುದ ಪ್ರಶ್ನೆ ಡಿಕೆ ಬಳಗದಲ್ಲಿ ಪ್ರತಿನಿತ್ಯ ಕಾಡುವ ಪ್ರಶ್ನೆಯಾಗಿದ. ಏಕೆಂದರೆ ಅರ್ಧ ಅವಧಿ ಪೂರೈಸಿದ ನಂತರದಲ್ಲಿ ಸ್ಥಾನವನ್ನು ಬಿಟ್ಟುಕೊಡಲು ಮಾತಾಗಿದ್ದು ಎಲ್ಲರಿಗೂ ತಿಳಿದಿ ವಿಷಯ ಆದರೆ ಇಂದು ಸಿಎಂ ಸಿದ್ದರಾಮಯ್ಯ ಸ್ಥಾನವನು ಬಿಟ್ಟುಕೊಡಲು ಹಿಂದೇಟು ಹಾಕುತ್ತಿರುವುದು ನೋಡಿದರೆ ಮಾತನ್ನು ತಪ್ಪುತತಿರುವ ಸಿಎಂ ಎನ್ನುವ maatu ಎಲ್ಲೆಂದರಲ್ಲಿ ಹರಿದಾಡುತ್ತಿದೆ. ಕಾಂಗ್ರೆಸ್ ಪಕ್ಷದ ಅಧ್ಯಕ್ಷ ರಾಗಿರುವ ಅಂದು ಪಕ್ಷ ಬಹುಮತ ಪಡೆದಾಗ ಸಿಎಂ ಆಗಲೇ ಬೇಕೆಂಬ ಒತ್ತಡವನ್ನು ಹೈ ಕಮಾಂಡ್ ಮೇಲೆ ಹೆರಿದ್ದರು. ಅದರೆ ಹೈ ಕಮಾಂಡ್ ಇದಕ್ಕೆ ಒಪ್ಪದೆ ಮಾಜಿ ಮುಖ್ಯಮಂತ್ರಿಯನ್ನೇ ಮತ್ತೆ ಎರಡನೇ ಬಾರೆಗೆ ಮುಖ್ಯಮಂತ್ರಿ ಎಂದು ಘೋಷಣೆ ಮಾಡಿದ್ದು ಅಂದು ಡಿಕೆಶಿ ರವರಿಗೆ ಭಾರಿ ಹಿನ್ನಡೆಯಾಗಿತ್ತು. ಈ ಹಿಂದೆ ಈಗಿನ ಗೃ ಹ ಮಂತ್ರಿಯಾಗಿರುವ ಡಾ. ಪರಮೇಶ್ವರ ಈ ಹಿಂದೆ ಅವಧಿಯ ಕಾಂಗ್ರೆಸ್ ಸರಕಾರದಲ್ಲಿ ಮುಖ್ಯಮಂತ್ರಿಯಾಗಬೇಕಿತ್ತು, ಮುಖ್ಯಮಂತ್ರಿ ಸ್ಥಾನದ ಪರಮೇಶ್ವರರಗೆ ಅಲ್ಲಿನ ಜನತ ಮತ ಹಾಕದಿದ್ದ ಕಾರಣದಿಂದ ಪರಮೇಶ್ವರ ಶಾಸಕರಾಗಿ ಆಯ್ಕೆಯಾಗಲಿಲ್ಲವಾದ್ದರಿಂದ ಅವರಿಗೆ ಮುಖ್ಯಮಂತ್ರಿ ಸ್ಥಾನ ದೊರೆಯಲಿಲ್ಲ,ಒಂದುವೇಳೆ ಅವರು ಶಾಸಕರಾಗಿ ಆಯ್ಕೆಯಾಗಿದ್ದರೆ ಅವರೇ ಹಿಂದಿನ ಅವಧಿಯ ಮುಖ್ಯಮತ್ರಿಯಾಗಿರುತ್ತಿದ್ದರು. ಏಕೆಂದರೆ ಅವರೇ ಆ ಅವಧಿಯಲ್ಲಿ ಕೊಂಗ್ರೆಸ್ ಪಕ್ಷದ ರಾಜ್ಯಾಧ್ಯಕ್ಷರಾಗಿದ್ದರು. ನಿಯಮದಂತೆ ಯಾರು ರಾಜ್ಯಾಧ್ಯಕ್ಷರಾಗಿರುತ್ತಾರೋ ಅವರೇ ಸಿಎಂ ಎಂದು ನೆಡೆಸಿಕೊಂಡ ಬಂದ ಪದ್ದತಿ. ಆದರೆ ಡಿಕೆಶಿ ಯವರಿಗೆ ಅದು ಅನ್ವಯಿಸದಿರುವುದು ವಿಪರ್ಯಾಸ. ಈ ಹಿಂದೆ ಡಾ. ಪರಮೇಶ್ವರರನ್ನು ಸಹ ಶಾಸಕರಾಗಿ ಆಯ್ಕೆಯಾಗದಿದ್ದರು ಸಹ ಮುಖ್ಯಮಂತ್ರಿ ಮಾಡಬಹುದಿತ್ತು. ಈ ತರಹದ ಮುಖ್ಯಮಂತ್ರಿಗಳು ನಮ್ಮಲ್ಲಿ ಆಗಿದ್ದಾರೆ. ಆದರೆ ಅದು ಹಾಗೆ ಆಗಲಿಲ್ಲ. ಕಾರಾಂತರಗಳಿಂದ ಆ ಸಿಎಂ ಪಟ್ಟ ಅಂದು ತಪ್ಪಿಹೋಯಿತು. ಆದರೆ ಈ ಬಾರೆ ಕಾಂಗ್ರೆಸ್ ರಾಜ್ಯಾಧ್ಯಕ್ಷರಾಗಿದ್ದವರು ಡಿಕೆಶಿ. ಆದರೂ ಅವರಿಗೆ ಕಾರಣಾಂತರಗಳಿಂದ ಸಿಎಂ ಪಟ್ಟ ಈವರಿಗೂ ತಪ್ಪಿ ಮತ್ತೆ ಎರಡನೆಯ ಬಾರೆಗೆ ಸಿದ್ದರಾಯಮ್ಮಯ್ಯ ವರು ರಾಜ್ಯದ ಮುಖ್ಯಮಂತ್ರಿಯಾದರು. ಡಿಕೆಶಿ ಉಪ ಮುಖ್ಯಮಂತ್ರಿ ಯಾಗಿ ತೃಪ್ತಿಪಡಬೇಕಾಯಿತು. ಆದರೆ 2.5 ವರ್ಷದ ನಂತರ ಡಿಕೆಶಿಯವರಿಗೆ ಮುಖ್ಯಮಂತ್ರಿ ಸ್ಥಾನವನ್ನು ನೀಡುವುದಾಗಿ ಹೈ ಕಮಾಂಡ್ ಭರವಸೆ ನೀಡಿತ್ತು. ಆ 2.5 ವರ್ಷ ಬಂದಾಗಿದೆ ಆದರೆ ಈಗಿನ ಸ್ಥಿಯಲ್ಲಿ ಸಿಎಂ ಬದಲಾವಣೆ ಬೆದೆ ಎಂದು ಹೈ ಕಮಾಂಡ್ ಹೇಳುತ್ತಿರುವುದು ಡಿಕೆಶಿಯವರಿಗೆ ಬಹಳ ನಿರಾಶೆಯಾಗಿದೆ. ಈ ಹಿಂದೆ ಬಿಎಸ್ ಯೆಡ್ಯೂ ರಪ್ಪ ಮುಖ್ಯಮಂತ್ರಿ ಯಾಗಿದ್ದಾಗ, ಡಿಕೆಶಿ ಯವರನ್ನು ಕಾಂಗ್ರೆಸ್ ಪಕ್ಷದಲ್ಲಿ ನೀವೊಬ್ಬ ವಿಲನ್ ಎಂದಾಗ ಕಾಂಗ್ರೆಸ್ ದಿಂದ ಬಹಳ ವಿರೋಧವಾಗಿತ್ತು ಆದರೆ ಅದಕ್ಕೆ ಉತ್ತರ ನೀಡಿದ್ದ ಬಿಎಸ್ ಯೆಡ್ಯೂರಪ್ಪ ಮಾತಿನ ಅರ್ಥ ನೀವು ಕಾಂಗ್ರೆಸ್ ಪಕ್ಷದಲ್ಲಿದ್ದರೆ ಎಂದೂ ಮುಖ್ಯಮಂತ್ರಿಯಾಗಲಿಕ್ಕೆ ಸಾದ್ಯವಿಲ್ಲವೆನ್ನು ವುದಾಗಿದೆ ಎಂದಿದ್ದರು. ಅದೇ ರೀತಿಯಲ್ಲಿ ಡಿಕೆಶಿಯವರ ಪರಸ್ಥಿತಿಯಾಗಿದೆ. ಕಾಂಗ್ರೆಸ್ ಹೈ ಕಮಾಂಡ್ ಈಗಲೂ ಸಹಿತ ಡಿಕೆಶಿ ಯವರನ್ನು ಸಿಎಂ ಮಾಡಲು ಹಿಂದೇಟು ಹಾಕುತ್ತಿದೆ. ಆದರೆ ಈಗಾಗಲೇ ದಿಕೇಶಿಯವರ ಬಣ ದೆಹಲಿಯಲ್ಲಿ ಬಿಡುಬಿಟ್ಟದ್ದು ದಿಕೇಶಿಯವರೇ ನಮ್ಮ ಮುಖ್ಯಮಂತ್ರಿಯೆಂದು ಸ್ವಯಂ ಘೋಷಣೆ ಮಾಡಿ, ಹೈ ಕಮಾಂಡ್ ನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಕೊಂಗ್ರೆಸ್ ಪಕ್ಷದ ಸರ್ವೋಚ್ಚ ನಾಯಕಿ ಸೋನಿಯಾ ಯವರಿಗೆ ಡಿಕೆಶಿಯವರು ಬಹಳ ಆಪ್ತರಾಗಿದ್ದರಿಂದ ಕಡೆ ಘಳಿಗೆಯಯಲ್ಲಿ ಎನದರೂ ಆಗುವ ಸಡಿತೆ ಇದೆ. ಮುಂದಿನ 2028 ರ್ ಚುನಾವಾಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರೋದಿಲ್ಲ ಎನ್ನುವ ಸಂಭವ ಇದೆ ಎಂದು ಗುಸು ಗುಸು ಮಾತುಗಳು ಹೈ ಕಮಾಂಡ್ ತೆಲೆ ಕೇಡಿಸಿದೆ. ಈ ಎಲ್ಲಾ ಬೆಳವಣಿಗೆಯಿಂದ ಡಿ ಕೆ ಶಿವಕುಮಾರ್ ರಾಜ್ಯದ ಮುಂದಿನ ಮುಖ್ಯ ಮಂತ್ರಿಯಾಗುವುದು ಖಚಿತವಾಗಿದೆ.
