ಬೆಂಗಳೂರು ಕೇಂದ್ರ ನಗರ ಪಾಲಿಕೆ

ನಗರದ ಸ್ವಚ್ಛತೆ, ಮೂಲಸೌಕರ್ಯ ಸುಧಾರಣೆಗಾಗಿ ಸಾಮೂಹಿಕ ಸ್ವಚ್ಛತೆ ಕಾರ್ಯ ಅಗತ್ಯ: ರಾಜೇಂದ್ರ ಚೋಳನ್

ಬೆಂಗಳೂರು : 23.11.2025. ಬೆಳಗಿನ ಕಿರಣ ನ್ಯೂಸ್ : ವರದಿ ಪ್ರಭು ಆದಿ : ಕೇಂದ್ರ ನಗರ ಪಾಲಿಕೆ ಆಯುಕ್ತರಾದ ಶ್ರೀ ರಾಜೇಂದ್ರ ಚೋಳನ್ ರವರು 20.11.2025 ರಂದು ಹಲಸೂರು ಕೆರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ನೀಡಿದ ನಿರ್ದೇಶನದ ಮೇರೆಗೆ, ಇಂದು ಹಲಸೂರು ಕೆರೆಯ ಆವರಣದಲ್ಲಿ ಸಮಗ್ರ ಸ್ವಚ್ಛತಾ ಕಾರ್ಯ ನಡೆಸಲಾಗಿದೆ. ಇದರೊಂದಿಗೆ, ಕೆ.ಆರ್. ಮಾರುಕಟ್ಟೆ ಮತ್ತು ಬಿ.ಜಿ.ಎಸ್. ಮೇಲ್ಸೇತುವೆ ಪ್ರದೇಶಗಳಲ್ಲಿ ತೀವ್ರ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಗಿದ್ದು, ಕಟ್ಟಡ ಭಗ್ನಾವಶೇಷಗಳು ಮತ್ತು ಘನತ್ಯಾಜ್ಯವನ್ನು ತೆರವುಗೊಳಿಸಲಾಯಿತು. ಸಿ.ವಿ. ರಾಮನ್ ನಗರ ಕ್ಷೇತ್ರದ ಸುರಂಜನ್ ದಾಸ್ ರಸ್ತೆಯ ಸರ್ವಿಸ್ ರಸ್ತೆಯಲ್ಲಿ ಡಾಂಬರೀಕರಣ ಕಾರ್ಯ ಪೂರ್ಣಗೊಳಿಸಲಾಗಿದ್ದು, ರಸ್ತೆ ಗುಣಮಟ್ಟವನ್ನು ಸುಧಾರಿಸಲಾಗಿದೆ. ತೋಟಗಾರಿಕೆ ವಿಭಾಗದ ವತಿಯಿಂದ ಬನ್ನಪ್ಪ ಪಾರ್ಕ್ ನಲ್ಲಿ ಹಾಗೂ ಜಯಮಹಲ್ ಪಾರ್ಕ್ ನಲ್ಲಿ ತ್ಯಾಜ್ಯ ತೆರವು ಕಾರ್ಯ ನಡೆಯಿತು. ಈ ಕೆಳಕಂಡ ಪ್ರದೇಶಗಳಲ್ಲಿ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಯಿತು: - ಚಿಕ್ಕಪೇಟೆ ಕ್ಷೇತ್ರದಲ್ಲಿ ಹಲವು ರಸ್ತೆಗಳಲ್ಲಿ - ಲಾಲ್ ಬಾಗ್ ರಸ್ತೆ (ಚಿಕ್ಕಪೇಟೆ) - ಶಾಂತಿನಗರ ಕ್ಷೇತ್ರದ ರೆಸಿಡೆನ್ಸಿ ರಸ್ತೆಯಲ್ಲಿ - ಗಾಂಧಿನಗರ ಕ್ಷೇತ್ರದ ಶೇಷಾದ್ರಿ ರಸ್ತೆ ಸುತ್ತಮುತ್ತ ನಗರದ ಸಂಚಾರ ಸುಗಮತೆ ಹಾಗೂ ಪಾದಚಾರಿ ಸುರಕ್ಷತೆಯನ್ನು ವೃದ್ಧಿಸುವ ಸಲುವಾಗಿ: - ಚಿನ್ನಯ್ಯನಪಾಳ್ಯ– ಬನ್ನೇರುಘಟ್ಟ ಮುಖ್ಯ ರಸ್ತೆ ಬಳಿ ಪಾದಚಾರಿ ಮಾರ್ಗದ ಮೇಲಿನ ಅತಿಕ್ರಮಣ ತೆರವುಗೊಳಿಸಲಾಯಿತು. - ರೆಸಿಡೆನ್ಸಿ ರಸ್ತೆ ಹಾಗೂ ರಿಚ್‌ಮಂಡ್ ರಸ್ತೆಯಲ್ಲಿ ಸ್ವಚ್ಚತಾ ಕಾರ್ಯ ಹಾಗೂ ಪಾದಚಾರಿ ಮಾರ್ಗ ದುರಸ್ತಿ ಕಾರ್ಯ ನಡೆಯಿತು.

ನಾಳೆ ಫೋನ್-ಇನ್ ಕಾರ್ಯಕ್ರಮ ಮೂಲಕ ನಾಗರೀಕರ ಅಹವಾಲು ಆಲಿಕೆ: ರಾಜೇಂದ್ರ ಚೋಳನ್

ಬೆಂಗಳೂರು : 23.11.2025. ಬೆಳಗಿನ ಕಿರಣ ನ್ಯೂಸ್ : ವರದಿ ಪ್ರಭು ಆದಿ :ನಾಳೆ ದಿನಾಂಕ: 24-11-2025 (ಸೋಮವಾರ) ರಂದು ಸಂಜೆ 6.00 ರಿಂದ 7.00 ಗಂಟೆಯವರೆಗೆ ನಾಗರಿಕರು ದೂರವಾಣಿ ಮೂಲಕ ಕರೆ ಮಾಡಿ ಮಾನ್ಯ ಆಯುಕ್ತರಿಗೆ ನೇರವಾಗಿ ಅಹಲವಾಲನ್ನು ಸಲ್ಲಿಸಬಹುದು. ಕರೆ ಮಾಡಬೇಕಾದ ದೂರವಾಣಿ ಸಂಖ್ಯೆ ಲ್ಯಾಂಡ್ಲೈನ್: 080-22975803 ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯ ನಾಗರೀಕರ ಸಮಸ್ಯೆಗಳನ್ನು ನೇರವಾಗಿ ಆಲಿಸಿ, ಸಮಸ್ಯೆಗಳಿಗೆ ತ್ವರಿತ ಪರಿಹಾರ ಒದಗಿಸುವ ಉದ್ದೇಶದಿಂದ ಬೆಂಗಳೂರು ಕೇಂದ್ರ ನಗರ ಪಾಲಿಕೆಯ ಆಯುಕ್ತರಾದ ಶ್ರೀ ರಾಜೇಂದ್ರ ಚೋಳನ್ ರವರು ಪ್ರತಿ ಸೋಮವಾರ ಸಂಜೆ 6.00 ರಿಂದ 7.00 ವರೆಗೆ ಫೋನ್-ಇನ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ಮೂಲಕ ಸಾರ್ವಜನಿಕರಿಂದ ಈ ಕೆಳಕಂಡ ವಿವಿಧ ಮೂಲಭೂತ ಸೌಕರ್ಯ ಕಲ್ಪಿಸುವ ಕುರಿತಂತೆ ದೂರವಾಣಿ ಮೂಲಕ ಅಹವಾಲುಗಳನ್ನು ಆಲಿಸಿ, ಸಮಸ್ಯೆಗಳಿಗೆ ತ್ವರಿತವಾಗಿ ಪರಿಹಾರ ಕಂಡುಕೊಳ್ಳಲು ಸಾರ್ವಜನಿಕರಲ್ಲಿ ವಿನಂತಿಸಲಾಗಿದೆ. ಅಹವಾಲು ಸಲ್ಲಿಸಬೇಕಾದ ವಿಷಯಗಳು: * ರಸ್ತೆ ಗುಂಡಿಗಳು ಮತ್ತು ರಸ್ತೆ ದುರಸ್ಥಿ ಕಾರ್ಯಗಳು * ಬೀದಿ ದೀಪಗಳ ನಿರ್ವಹಣೆ * ಕಸ ವಿಲೇವಾರಿ * ಒಣಗಿದ / ಅಪಾಯಕಾರಿ ಮರ/ಕೊಂಬೆಗಳ ಕತ್ತರಿಸುವಿಕೆ * ಉದ್ಯಾನವನಗಳ ನಿರ್ವಹಣೆ * ಇ-ಖಾತಾ ಸಂಬಂಧಿತ ವಿಷಯಗಳು * ಅನಧಿಕೃತ ಬ್ಯಾನರ್/ಪೋಸ್ಟರ್ ಗಳ ತೆರವು * ಪಾದಚಾರಿ ಮಾರ್ಗದ ನಿರ್ವಹಣೆ ಮತ್ತು ಒತ್ತುವರಿ * ಚರಂಡಿ ಶುದ್ಧೀಕರಣ * ನಗರಪಾಲಿಕೆಯಿಂದ ಇನ್ನಿತರೆ ಮೂಲಭೂತ ಸೌಕರ್ಯ ಕಲ್ಪಿಸುವ ಅಹವಾಲುಗಳು ನಾಳೆ ದಿನಾಂಕ: 24-11-2025 (ಸೋಮವಾರ) ರಂದು ಸಂಜೆ 6.00 ರಿಂದ 7.00 ಗಂಟೆಯವರೆಗೆ ದೂರವಾಣಿ ಮೂಲಕ ಕರೆ ಮಾಡಿ ನೇರವಾಗಿ ಮಾನ್ಯ ಆಯುಕ್ತರಾದ ಶ್ರೀ ರಾಜೇಂದ್ರ ಚೋಳನ್ ರವರೊಂದಿಗೆ ಮಾತನಾಡಿ ನಾಗರೀಕರು ಅಹವಾಲುಗಳನ್ನು ಸಲ್ಲಿಸಬಹುದಾಗಿದೆ. ನಾಗರಿಕರಿಂದ ಸ್ವೀಕೃತವಾಗುವ ಅಹವಾಲುಗಳನ್ನು ಮಾನ್ಯ ಆಯುಕ್ತರು ಖುದ್ದಾಗಿ ಆಲಿಸಿ ಅಧಿಕಾರಿಗಳಿಗೆ ಸ್ಥಳದಲ್ಲಿಯೇ ನಿರ್ದೇಶನ ನೀಡಿ ಸಮಸ್ಯೆಗಳನ್ನು ಪರಿಹರಿಸಲು ಕ್ರಮ ವಹಿಸಲಾಗುವುದು. ಫೋನ್-ಇನ್ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಕರೆ ಮಾಡಬೇಕಾದ ದೂರವಾಣಿ ಸಂಖ್ಯೆ: ನಿಯಂತ್ರಣ ಕೊಠಡಿ ಸಂಪರ್ಕ ಸಂಖ್ಯೆ ಲ್ಯಾಂಡ್ಲೈನ್: 080-22975803 *