ಮನುಷ್ಯನ ಜೀವನ ಒಂದು ಪಾಠ ಶಾಲೆ
ಜೀವನದಲ್ಲಿ ಪ್ರತಿಯೊಂದು ಸಂಗತಿಯು ಒಂದೊಂದು ಪಾಠವನ್ನು ಕಲಿಸುತ್ತಾ ಹೋಗುತ್ತದೆ. ಆ ಪಾಠಗಳಿಂದ ನಾವು ಯಾವ ರೀತಿಯಲ್ಲಿ ಮುಂದೆ ಸಾಗುತ್ತೇವೆ ಎನ್ನವುದರ ಮೇಲೆ ನಮ್ಮ ಮುಂದಿನ ಭವಿಷ್ಯ ನಿದಾ೯ರವಾಗುತ್ತದೆ. ಅದಕ್ಕೆ ನಮ್ಮ ಮುಂದೆ ಅನೇಕ ಉದಾಹರಣೆಗಳು ನಮಗೆ ದೊರೆಯುತ್ತವೆ . ನಮ್ಮಎದುರಿಗೆ ಬರುವ ಪ್ರತಿಯೊಂದು ಘಟನೆಗಳನ್ನು ಬಹಳ ಸೂಕ್ಷ್ಮ ರೀತಿಯಲ್ಲಿ ನೋಡಬೇಕಾಗಿರುವುದು ಪ್ರತಿಯೊಬ್ಬರ ಕರ್ತವ್ಯ ಕೂಡ, ಏಕೆಂದರೆ ಈ ಘಟನೆಗಳು ನಮಗೆ ಮುಂದಿನ ಆಗು ಹೋಗುಗಳನ್ನು ಬಿಂಬಿಸುತ್ತವೆ , ಇಂಥವುಗಳನ್ನು ನಾವು ಅರಿಯದೆ ಹೋದರೆ ಅದರಿಂದ ಕೆಲವೊಂದು ಸಲ ತಲುಪಬೇಕಾದ ಗುರಿ ತಲಪದೇ ಹೋಗ ಬಹದು. , ಒಂದೊಂದು ಸಾರೆ ಮನೆಯಲ್ಲಿ ಸಣ್ಣ ಪುಟ್ಟ ಬಿನ್ನಾಭಿಪ್ರಾಯ ಉಂಟಾಗಿದ್ದರಿಂದ ಕುಟುಂಬದ ಸಹಪಾಠಿಗಲ್ಲಿ ಮನಸ್ಸಿಗೆ ತೊಂದರೆ ಆಗಬಹುದು, ಆಗ ಹೀಗೆ ಆಗದಂತೆ ಮನೆಯ ಹಿರಿಯರು ಮುಂದಿನ ಹೆಜ್ಜೆ ಇಡಬೇಕು, ಸಣ್ಣ ಪುಟ್ಟವುಗಳು ಮುಂದೊಂದು ದಿನ ದೊಡ್ಡವುಗಳಾಗಿ ಇದಕ್ಕಾಗಿ ಸಾರಿಪಡಿಸಲಾಗದ ರೀತಿಯಲ್ಲಿ ತೊಂದರೆ ಅನುಭವಿಸಬೇಕಾಗಬಹುದು.
