ಬೆಂಗಳೂರು ಪೂರ್ವ ನಗರ ಪಾಲಿಕೆ

ಸುಗಮ ಸಂಚಾರಕ್ಕಾಗಿ ಪೂರ್ವ ನಗರ ಪಾಲಿಕೆಯಿಂದ ಇ.ಇ.ಎಫ್.ಸಿ ಪ್ರಾಯೋಗಿಕ ಅನುಷ್ಠಾನ

: ಬೆಂಗಳೂರು ಪೂರ್ವ ನಗರ ಪಾಲಿಕೆ ಬೆಂಗಳೂರು: 02 ಆಗಸ್ಟ್ 2026 ನಗರ ಪಾಲಿಕೆ ವ್ಯಾಪ್ತಿಯಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡಿ, ವಾಹನಗಳ ಸುಗಮ ಸಂಚಾರ, ಹಾಗೂ ರಸ್ತೆ ಸುರಕ್ಷತೆಯನ್ನು ಹೆಚ್ಚಿಸುವ ಉದ್ದೇಶದಿಂದ ಬೆಂಗಳೂರು ಪೂರ್ವ ನಗರ ಪಾಲಿಕೆಯು ಸುಗಮ ಸಂಚಾರಕ್ಕಾಗಿ ಶಿಸ್ತುಬದ್ದ ಸಂಚಾರಿ ಕಾರಿಡಾರ್ (ಎನ್ಫೋರ್ಸ್ಡ್ ಈಸಿ ಫ್ಲೋ ಕಾರಿಡಾರ್) ಪರಿಕಲ್ಪನೆಯನ್ನು ಕಗ್ಗದಾಸಪುರ ರೈಲ್ವೆ ಕ್ರಾಸಿಂಗ್ ಹಾಗೂ ಕಗ್ಗದಾಸಪುರ ಮುಖ್ಯರಸ್ತೆಯಲ್ಲಿ ಪ್ರಾಯೋಗಿಕವಾಗಿ ಯಶಸ್ವಿಯಾಗಿ ಅನುಷ್ಠಾನಗೊಳಿಸಿದೆ ಎಂದು ಅಪರ ಆಯುಕ್ತರಾದ ಲೋಖಂಡೆ ಸ್ನೇಹಲ್ ಸುಧಾಕರ್ ರವರು ತಿಳಿಸಿದರು. ಈ ಯೋಜನೆಯು ಯಾವುದೇ ದೊಡ್ಡ ಪ್ರಮಾಣದ ಸಿವಿಲ್ ಕಾಮಗಾರಿಗಳನ್ನು ಕೈಗೊಳ್ಳದೆ, ಈಗಿರುವ ರಸ್ತೆ ಮೂಲಸೌಕರ್ಯವನ್ನು ಸಮರ್ಪಕವಾಗಿ ಬಳಸಿಕೊಂಡು ವಾಹನಗಳ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸುವ ನೂತನ ಸಂಚಾರ ನಿರ್ವಹಣಾ ಮಾದರಿಯಾಗಿದೆ. ಪ್ರಮುಖ ಜಂಕ್ಷನ್ಗಳಲ್ಲಿ ಸಂಚಾರದ ಸ್ವರೂಪವನ್ನು ಅಧ್ಯಯನ ಮಾಡಿ, ದಟ್ಟಣೆಗೆ ಕಾರಣವಾಗುವ ಅಂಶಗಳನ್ನು ಗುರುತಿಸಿ, ಸ್ಥಳೀಯ ಪರಿಸ್ಥಿತಿಗೆ ಅನುಗುಣವಾಗಿ ತ್ವರಿತ ಹಾಗೂ ಪರಿಣಾಮಕಾರಿ ಇಂಜಿನಿಯರಿಂಗ್ ಕ್ರಮಗಳನ್ನು ಜಾರಿಗೊಳಿಸುವುದೇ ಇಇಎಫ್ಸಿ ಪರಿಕಲ್ಪನೆ ಮುಖ್ಯ ಉದ್ದೇಶವಾಗಿದೆ. ಕಗ್ಗದಾಸಪುರದಲ್ಲಿ ಪ್ರಾಯೋಗಿಕ ಅನುಷ್ಠಾನ ಇ.ಇ.ಎಫ್.ಸಿ ಪರಿಕಲ್ಪನೆ ಪ್ರಾಯೋಗಿಕ ಅನುಷ್ಠಾನವನ್ನು ಕಗ್ಗದಾಸಪುರ ರೈಲ್ವೆ ಕ್ರಾಸಿಂಗ್ ಪ್ರದೇಶದಲ್ಲಿ ಕೈಗೊಳ್ಳಲಾಗಿದ್ದು, ಒಟ್ಟು ಸುಮಾರು 175 ಮೀಟರ್ ಉದ್ದದ ರಸ್ತೆ ವ್ಯಾಪ್ತಿಯಲ್ಲಿ ಮೂರು ದಿಕ್ಕುಗಳಲ್ಲಿ ಯೋಜನೆಯನ್ನು ಅಭಿವೃದ್ಧಿಪಡಿಸಲಾಗಿದೆ. • ರೈಲ್ವೆ ಕ್ರಾಸಿಂಗ್ನಿಂದ ಕಗ್ಗದಾಸಪುರ ಮುಖ್ಯರಸ್ತೆ ಕಡೆಗೆ ಸುಮಾರು 50 ಮೀಟರ್ • ವಿಜ್ಞಾನನಗರ ಕಡೆಗೆ ಹಾದುಹೋಗುವ ರಸ್ತೆಯಲ್ಲಿ ಸುಮಾರು 50 ಮೀಟರ್ • ಮಹದೇವಪುರ ಕಡೆಗೆ ಹಾದುಹೋಗುವ ರಸ್ತೆಯಲ್ಲಿ ಸುಮಾರು 75 ಮೀಟರ್ ಈ ಪ್ರದೇಶದಲ್ಲಿ ವಾಹನಗಳ ಚಲನವಲನವನ್ನು ಸಮಗ್ರವಾಗಿ ಅಧ್ಯಯನ ಮಾಡಿ, ಸಂಚಾರ ಅಡಚಣೆ ಉಂಟಾಗುವ ಪ್ರಮುಖ ಸ್ಥಳಗಳನ್ನು ಗುರುತಿಸಿ, ಅದಕ್ಕೆ ತಕ್ಕಂತೆ ಸಂಚಾರ ವ್ಯವಸ್ಥೆಯನ್ನು ಮರು ವಿನ್ಯಾಸಗೊಳಿಸಲಾಗಿದೆ. ಅನುಷ್ಠಾನಗೊಳಿಸಲಾದ ಪ್ರಮುಖ ಕ್ರಮಗಳು ಪ್ರತಿ ಜಂಕ್ಷನ್ನ ಸಂಚಾರದ ಸ್ವರೂಪ ವಿಭಿನ್ನವಾಗಿರುವುದರಿಂದ ಸ್ಥಳೀಯ ಅಗತ್ಯಗಳಿಗೆ ಅನುಗುಣವಾಗಿ ವಿವಿಧ ಇಂಜಿನಿಯರಿಂಗ್ ಕ್ರಮಗಳನ್ನು ಅಳವಡಿಸಲಾಗಿದೆ. ಅವುಗಳಲ್ಲಿ ಪ್ರಮುಖವಾಗಿ: • ಕಾರ್ಯತಂತ್ರದ ಆಧಾರದ ಮೇಲೆ ಬ್ಯಾರಿಕೇಡ್ಗಳ ಅಳವಡಿಕೆ • ಲೇನ್ ಡಿವೈಡರ್ಗಳ ಸ್ಥಾಪನೆ • ಅಗತ್ಯಕ್ಕೆ ತಕ್ಕ ಸಂಚಾರ ಸೂಚನಾ ಫಲಕಗಳ ಅಳವಡಿಕೆ • ಟ್ರಾಫಿಕ್ ಸ್ಟಾಪಿಂಗ್ ಚೈನ್ ವ್ಯವಸ್ಥೆ • ತಪ್ಪು ದಿಕ್ಕಿನಲ್ಲಿ ವಾಹನ ಸಂಚಾರ ತಡೆಗಟ್ಟುವ ವ್ಯವಸ್ಥೆ • ವಾಹನಗಳ ಸುಗಮ ಮಾರ್ಗೀಕರಣ • ಜಂಕ್ಷನ್ವಾರು ವಿಶೇಷ ಸಂಚಾರ ನಿರ್ವಹಣಾ ಕ್ರಮಗಳು ಈ ಕ್ರಮಗಳಿಂದ ವಾಹನಗಳ ಅನಗತ್ಯ ಅಡ್ಡ ಸಂಚಾರ ಕಡಿಮೆಯಾಗಿದ್ದು, ಸಂಚಾರ ಶಿಸ್ತು ಹೆಚ್ಚುವುದರೊಂದಿಗೆ ದಟ್ಟಣೆ ನಿಯಂತ್ರಣಕ್ಕೆ ಸಹಕಾರಿಯಾಗಲಿದೆ. ವಿಶೇಷ ವಿನ್ಯಾಸದ ಬ್ಯಾರಿಕೇಡ್‌ಗಳು ಮತ್ತು ತುರ್ತು ಸಂಚಾರ ವ್ಯವಸ್ಥೆ ಕಗ್ಗದಾಸಪುರದಲ್ಲಿ ಪ್ರಾಯೋಗಿಕವಾಗಿ ಅನುಷ್ಠಾನಗೊಂಡಿರುವ ಇ.ಇ.ಎಫ್.ಸಿ ಸುಮಾರು 175 ಮೀಟರ್ ವ್ಯಾಪ್ತಿಯನ್ನು ಒಳಗೊಂಡಿದ್ದು, ಮೂರು ರಸ್ತೆಗಳು ಹಾಗೂ ಪ್ರಮುಖ ಜಂಕ್ಷನ್ ಅನ್ನು ಸಂಪರ್ಕಿಸುತ್ತದೆ. ಯೋಜನೆಯಡಿ ಅಳವಡಿಸಲಾದ ವಿಶೇಷ ವಿನ್ಯಾಸದ ಬ್ಯಾರಿಕೇಡ್‌ಗಳು ದೃಢತೆ, ಆಕರ್ಷಕ ವಿನ್ಯಾಸ ಹಾಗೂ ಬಹು ಉದ್ದೇಶೀಯ ಬಳಕೆಗೆ ಅನುಗುಣವಾಗಿದ್ದು, ರಸ್ತೆಯ ಮೇಲೆ ಸುಲಭವಾಗಿ ಅಳವಡಿಸಬಹುದಾಗಿದೆ. ಅಗತ್ಯವಿದ್ದಾಗ ತಾಂತ್ರಿಕ ಸಿಬ್ಬಂದಿ ಅವುಗಳನ್ನು ಕ್ಷಿಪ್ರವಾಗಿ ತೆರವುಗೊಳಿಸುವ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ. ಜೊತೆಗೆ, ಬ್ಯಾರಿಕೇಡ್‌ಗಳು ಪುಷ್-ಪುಲ್ ಚೈನ್ ವ್ಯವಸ್ಥೆ ಮೂಲಕ ಪರಸ್ಪರ ಸಂಪರ್ಕಗೊಂಡಿರುವುದರಿಂದ ಸಂಚಾರ ನಿಯಂತ್ರಣವನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಸಾಧ್ಯವಾಗುತ್ತದೆ. ಕಾರಿಡಾರ್ ಪ್ರವೇಶ ದ್ವಾರಗಳಲ್ಲಿ ವಿಶೇಷ ಸಂಚಾರ ಸೂಚನಾ ಫಲಕಗಳನ್ನು ಅಳವಡಿಸಲಾಗಿದ್ದು, ವಾಹನ ದಟ್ಟಣೆ ಹೆಚ್ಚಾಗುವ ಸಮಯದಲ್ಲಿ ಸಂಚಾರವನ್ನು ಸಮರ್ಪಕವಾಗಿ ನಿಯಂತ್ರಿಸಲು ಸಂಚಾರ ಪೊಲೀಸರಿಗೆ ಹೆಚ್ಚುವರಿ ಚೈನ್‌ಗಳನ್ನು ಒದಗಿಸಲಾಗಿದೆ. ಇದರಿಂದ ವಾಹನಗಳು ನಿಗದಿತ ಮಾರ್ಗದಲ್ಲೇ ಶಿಸ್ತುಬದ್ಧವಾಗಿ ಸಂಚರಿಸುವುದರೊಂದಿಗೆ ಸಂಚಾರದ ಹರಿವು ನಿರಂತರವಾಗಿ ಕಾಯ್ದುಕೊಳ್ಳಲು ನೆರವಾಗುತ್ತದೆ. ಬ್ಯಾರಿಕೇಡ್‌ಗಳಲ್ಲಿ ಅಳವಡಿಸಲಾದ ವಿಶೇಷ ಇಂಟರ್‌ಲಾಕ್ ವ್ಯವಸ್ಥೆ ಮೂಲಕ ಆಂಬ್ಯುಲೆನ್ಸ್, ಅಗ್ನಿಶಾಮಕ ವಾಹನ ಸೇರಿದಂತೆ ತುರ್ತು ಸೇವಾ ವಾಹನಗಳಿಗೆ ಸಂಚಾರ ಪೊಲೀಸರು ಅತ್ಯಂತ ಕಡಿಮೆ ಸಮಯದಲ್ಲಿ ಸುರಕ್ಷಿತವಾಗಿ ದಾರಿ ಮಾಡಿಕೊಡಲು ಸಾಧ್ಯವಾಗುತ್ತದೆ. ಅಲ್ಲದೆ, ಪ್ರತಿ ಬ್ಯಾರಿಕೇಡ್‌ನ ತೂಕ 20 ಕೆ.ಜಿ.ಗಿಂತ ಕಡಿಮೆ ಇರುವುದರಿಂದ, ತುರ್ತು ಸಂದರ್ಭಗಳಲ್ಲಿಯೂ ಒಬ್ಬ ಸಂಚಾರ ಪೊಲೀಸ್ ಸಿಬ್ಬಂದಿಯೇ ಅದನ್ನು ಸುಲಭವಾಗಿ ನಿರ್ವಹಿಸಬಹುದಾಗಿದೆ. ಈ ವಿನ್ಯಾಸವು ಸಂಚಾರ ನಿರ್ವಹಣೆಯನ್ನು ಇನ್ನಷ್ಟು ಪರಿಣಾಮಕಾರಿ, ಸುರಕ್ಷಿತ ಹಾಗೂ ಸಾರ್ವಜನಿಕ ಸ್ನೇಹಿಯನ್ನಾಗಿಸಿದೆ. ಇ.ಇ.ಎಫ್.ಸಿ ಅನುಷ್ಟಾನದ ಅಂಕಿ-ಅಂಶಗಳ ವರದಿ ಇ.ಇ.ಎಫ್.ಸಿ ಪೈಲಟ್ ಯೋಜನೆಯು ಕಡ್ಡಾಯ ಲೇನ್ ಶಿಸ್ತು ಮತ್ತು ನಿರಂತರ ವಾಹನ ಸಂಚಾರವನ್ನು ಜಾರಿಗೊಳಿಸುವ ಮೂಲಕ ಜಂಕ್ಷನ್ನ ಕಾರ್ಯಕ್ಷಮತೆಯಲ್ಲಿ ಗಮನಾರ್ಹ ಸುಧಾರಣೆ ಸಾಧಿಸಿದೆ. ಅನುಷ್ಟಾನದ ಪ್ರಮುಖ ಫಲಿತಾಂಶಗಳು ಈ ಕೆಳಗಿನಂತಿವೆ: * ಸಾಲು (Queue) ತೆರವುಗೊಳಿಸುವ ಸಮಯ: 60–75% ರಷ್ಟು ಕಡಿಮೆಯಾಗಿದ್ದು, ರೈಲ್ವೆ ಗೇಟ್ ತೆರೆಯುವ ಬಳಿಕ ವಾಹನಗಳ ಸಂಚಾರವು ವೇಗವಾಗಿ ಸಹಜ ಸ್ಥಿತಿಗೆ ಮರಳಿತು. * ಪ್ರಯಾಣ ಸಮಯ: 50–60% ರಷ್ಟು ಇಳಿಕೆಯಾಗಿದ್ದು, ವಾಹನ ಸಂಚಾರವ…